ಚಿಕ್ಕೋಡಿಯಲ್ಲಿ ಮಿನಿಬಸ್-ಟೆಂಪೋ ನಡುವೆ ಅಪಘಾತ, 20ಕ್ಕೂ ಹೆಚ್ಚು ಜನರಿಗೆ ಗಾಯ! - ಸಂಕೇಶ್ವರ- ಜೇವಗಿ೯ ರಾಜ್ಯ ಹೆದ್ದಾರಿ
ಟೆಂಪೂ ಹಾಗೂ ಮಿನಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹಲವು ಮಂದಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರ ಬಳಿ ನಡೆದಿದೆ. ಮಿನಿ ಬಸ್ ದಲ್ಲಿದ್ದ 20 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಸಮೀಪದ ಸಂಕೇಶ್ವರ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದ್ರಾಕ್ಷಿ ತುಂಬಿಸಿಕೊಂಡು ಬೆಳಗಾವಿ ಕಡೆಗೆ ಸಾಗುತ್ತಿದ್ದ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ, ಮದುವೆ ಮುಗಿಸಿಕೊಂಡು ಚಿಕ್ಕೋಡಿ ಕಡೆಗೆ ತೆರಳುತ್ತಿದ್ದ ಮಿನಿ ಬಸ್ಸಿಗೆ ಢಿಕ್ಕಿ ಹೊಡೆದಿದೆ. ಈ ಸಂಬಂಧ ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.