ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಕೃತ್ಯಕ್ಕೆ ಖಂಡನೆ: ಎಬಿವಿಪಿ ಪ್ರತಿಭಟನೆ - ಸಿಎಎ ಯನ್ನು ವಿರೋಧಿಸಿ ನಡೆದ ಕಾರ್ಯಕ್ರಮ
ಸಿಎಎ ವಿರೋಧಿಸಿ ನಡೆದ ಕಾರ್ಯಕ್ರಮದಲ್ಲಿ ಅಮೂಲ್ಯ ಲಿಯೋನ್ ಪಾಕಿಸ್ತಾನದ ಪರ ಘೋಷಣೆ ಕೂಗಿರೋದನ್ನು ಖಂಡಿಸಿ ಮಂಗಳೂರಿನ ಮನಪಾ ಬಳಿ ಎಬಿವಿಪಿ ಸಂಘಟನೆ ಇಂದು ರಾತ್ರಿ ಪ್ರತಿಭಟನೆ ನಡೆಸಿತು. ಈ ಸಂದರ್ಭ ಅಮೂಲ್ಯ ಲಿಯೋನ್ ಭಾವಚಿತ್ರವನ್ನು ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.