ರೋಡ್ ರೋಮಿಯೋಗೆ ಚಪ್ಪಲಿ ಏಟು.. ನಡುರಸ್ತೆಯಲ್ಲೇ ಥಳಿಸಿದ ಮಹಿಳೆ! - ರೋಡ್ ರೋಮಿಯೋಗೆ ಚಪ್ಪಲಿ ಏಟು
ಸೂರತ್(ಗುಜರಾತ್): ಮಹಿಳೆಯರನ್ನ ಹಿಂಬಾಲಿಸಿ ಕಿರುಕುಳ ನೀಡ್ತಿದ್ದ ರೋಡ್ ರೋಮಿಯೋಗೆ ನಡುರಸ್ತೆಯಲ್ಲೇ ಥಳಿಸಿರುವ ಘಟನೆ ನಡೆದಿದೆ. ಗುಜರಾತ್ನ ಸೂರತ್ನ ಗೋದಾದಾರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬಳು ಚಪ್ಪಲಿಯಿಂದ ಥಳಿಸಿದ್ದಾರೆ. ಇದರ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಳೆದ ಕೆಲ ದಿನಗಳಿಂದ ಮಹಿಳೆಯರಿಗೆ ಕಿರುಕುಳ ನೀಡುವುದರ ಜೊತೆಗೆ ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದನಂತೆ. ಇದರಿಂದ ರೊಚ್ಚಿಗೆದ್ದ ಮಹಿಳೆಯೊಬ್ಬರು ನಡುರಸ್ತೆಯಲ್ಲೇ ಥಳಿಸಿದ್ದಾಳೆ. ಜೊತೆಗೆ ಆತನ ಕೊರಳಿಗೆ ಶೂ ಹಾಕಿದ್ದಾಳೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಆರೋಪಿಗೋಸ್ಕರ ಶೋಧಕಾರ್ಯ ಆರಂಭಿಸಿದ್ದಾರೆ.