ಸಂಭ್ರಮದ ಬೆನ್ನಲ್ಲೇ ಸೂತಕ.. ಕುಸ್ತಿ ಗೆದ್ದ ಒಂದೇ ಗಂಟೆಯಲ್ಲಿ ಯುವ ಕುಸ್ತಿಪಟು ಸಾವು - ವಖ್ರಿಯ ಕುಸ್ತಿಪಟು ಮಾರುತಿ ಸುರವಾಸೆ
ಸೊಲ್ಲಾಪುರ/ಮಹಾರಾಷ್ಟ್ರ: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಕುಸ್ತಿಯಲ್ಲಿ ಗೆದ್ದು ಸಂಭ್ರಮದ ಗುಂಗಿನಲ್ಲಿರುವಾಗಲೇ ಹೃದಯಾಘಾತದಿಂದ ಯುವ ಕುಸ್ತಿಪಟು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಂಢರಪುರ ತಾಲೂಕಿನಲ್ಲಿ ನಡೆದಿದೆ. ವಖ್ರಿಯ ಕುಸ್ತಿಪಟು ಮಾರುತಿ ಸುರವಾಸೆ (22) ಮೃತ ಯುವಕ. ಕಳೆದ ರಾತ್ರಿ ಕೊಲ್ಲಾಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಕುಸ್ತಿ ಪಂದ್ಯವನ್ನು ಮಾರುತಿ ಗೆದ್ದಿದ್ದರು. ಬಳಿಕ ಖುಷಿಯಿಂದ ಹಿಂದಿರುಗಿದ ಸ್ವಲ್ಪ ಸಮಯದ ನಂತರ ಹೃದಯಾಘಾತವಾಗಿದೆ. ಮಾರುತಿಗೆ ಬಾಲ್ಯದಿಂದಲೂ ಕುಸ್ತಿಯೆಂದರೆ ಹೆಚ್ಚಿನ ಒಲವು. ಕುಸ್ತಿಯಲ್ಲಿ ವೃತ್ತಿಜೀವನ ಮುಂದುವರಿಸಬೇಕೆಂದು ತರಬೇತಿಗಾಗಿ ಕೊಲ್ಲಾಪುರಕ್ಕೆ ಕಳುಹಿಸಲಾಗಿತ್ತು. ಮೃತನ ತಂದೆ ವಖ್ರಿಯಲ್ಲಿ ಕೃಷಿಕರಾಗಿದ್ದಾರೆ.