ಪೋರಬಂದರ್‌ನಿಂದ ಯುಎಇಗೆ ತೆರಳುತ್ತಿದ್ದ ಹಡಗು ಮುಳುಗಡೆ.. 22 ಸಿಬ್ಬಂದಿ ರಕ್ಷಣೆ - Indian Coast Guard is carrying out rescue operations in Arabian Sea
ಪೋರ್ಬಂದರ್(ಗುಜರಾತ್): ಪೋರಬಂದರ್‌ನಿಂದ ಯುಎಇಗೆ ತೆರಳುತ್ತಿದ್ದ ಹಡಗು ಅರಬ್ಬೀ ಸಮುದ್ರದಲ್ಲಿ ಮುಳುಗಡೆಯಾಗಿದೆ. ಕೋಸ್ಟ್ ಗಾರ್ಡ್ ಸಿಬ್ಬಂದಿ 22 ಕ್ರೂ ಸದಸ್ಯರನ್ನು ರಕ್ಷಿಸಿದ್ದಾರೆ. ಅನಿಯಂತ್ರಿತ ಪ್ರವಾಹದಿಂದಾಗಿ ಎಂಟಿ ಗ್ಲೋಬಲ್ ಕಿಂಗ್‌ನಿಂದ ದುರಂತದ ಬಗ್ಗೆ ಎಚ್ಚರಿಕೆಯನ್ನು ಸ್ವೀಕರಿಸಿದ ನಂತರ ಭಾರತೀಯ ಕೋಸ್ಟ್ ಗಾರ್ಡ್ ಗುಜರಾತ್‌ನ ಪೋರಬಂದರ್ ಕರಾವಳಿಯ ಬಳಿ ಅರಬ್ಬೀ ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇತರ ಏಜೆನ್ಸಿಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಖೋರ್ ಫಕ್ಕಾನ್ ಯುಎಇ-ಕಾರವಾರ ಇಂಡಿಯಾ ಹೆಸರಿನ ಹಡಗು 6000 ಟನ್ ಬಿಟುಮೆನ್ ಅನ್ನು ಹೊತ್ತು ಸಾಗುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ.