'ಈಡಿಯಟ್' ವಾಗ್ವಾದ: ವಲಸೆ ಕಾರ್ಮಿಕರ ವಿಚಾರವಾಗಿ ಅಧಿಕಾರಿಗಳ ನಡುವೆ ಗಲಾಟೆ..! - ಬೆಳಗಾವಿ ಮಹಾನಗರ ಪಾಲಿಕೆ ಉಪ ಆಯುಕ್ತ ಎಸ್.ಬಿ. ದೊಡ್ಡಗೌಡರ
ಬೆಳಗಾವಿ: ಅನ್ಯ ರಾಜ್ಯದ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ವಿಚಾರಕ್ಕೆ ಇಬ್ಬರು ಅಧಿಕಾರಿಗಳ ನಡುವೆ, ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ವಾಗ್ವಾದ ನಡೆದಿದೆ. ಎರಡು ದಿನಗಳ ಹಿಂದೆ ನಡೆದ ಇಬ್ಬರು ಅಧಿಕಾರಿಗಳ ನಡುವಿನ ವಾಗ್ವಾದದ ದೃಶ್ಯ ವೈರಲ್ ಆಗಿದೆ. ಈ ವೇಳೆ ಈಡಿಯಟ್ ಎನ್ನುವ ಪದ ಬಳಕೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ ಉಪ ಆಯುಕ್ತ ಎಸ್.ಬಿ. ದೊಡ್ಡಗೌಡರ ಹಾಗೂ ಕೆಎಸ್‌ಆರ್‌ಟಿಸಿ ಬೆಳಗಾವಿ ಡಿಸಿ ಮಹಾದೇವಪ್ಪ ಮುಂಜಿ ಮಧ್ಯೆ ವಾಗ್ವಾದ ನಡೆದಿದೆ.