ಜಿಂಕೆ ಮೇಲೆ ಸವಾರಿ ಮಾಡಿದ ಕೋತಿ: ಕುವೆಂಪು ವಿವಿ ಆವರಣದಲ್ಲಿ ದೃಶ್ಯ ಸೆರೆ, ವೈರಲ್ ವಿಡಿಯೋ - ಜಿಂಕೆ ಮೇಲೆ ಕೋತಿ ಕುಳಿತು ಸವಾರಿ
ಶಿವಮೊಗ್ಗ: ಪರಿಸರದಲ್ಲಿ ಆಗಾಗ ಕೆಲವೊಂದು ವಿಸ್ಮಯಗಳು ನಡೆಯುತ್ತಿರುತ್ತವೆ. ಇದೀಗ, ಶಿವಮೊಗ್ಗ ಜಿಲ್ಲೆಯ ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಜಿಂಕೆ ಮೇಲೆ ಕೋತಿ ಕುಳಿತು ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ವಿಶ್ವವಿದ್ಯಾಲಯದ ಸಮುಚ್ಚಯ ಕೊಠಡಿಯ ಹಿಂಭಾಗದಲ್ಲಿ ಕೋತಿ ಯೊಂದು ಜಿಂಕೆ ಮೈ ಮೇಲೆ ಕುಳಿತು ಸವಾರಿ ಮಾಡಿದೆ. ಈ ದೃಶ್ಯವನ್ನ ಅಲ್ಲಿನ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.