ಗ್ರಾಮಕ್ಕೆ ನುಗ್ಗಿ ಹಸು ಬೇಟೆಯಾಡಿದ ಸಿಂಹ.. ಬೆಚ್ಚಿಬಿದ್ದ ಜನ - ಗಿರ್ ಅರಣ್ಯದಿಂದ ಗ್ರಾಮಕ್ಕೆ ಬಂದ ಸಿಂಹ
ಅಮರೇಲಿ ಜಿಲ್ಲೆಯ ಖಾಂಭಾ ತಾಲೂಕಿನ ಇಂಗೋರಾಳ ಗ್ರಾಮದಲ್ಲಿ ಶನಿವಾರ ಬೆಳಗಿನಜಾವ ಸಿಂಹವೊಂದು ಹಸುವಿನ ಮೇಲೆ ದಾಳಿ ಮಾಡಿದೆ. ಮನೆಯ ಮುಂದೆ ಕಟ್ಟಿಹಾಕಲಾಗಿದ್ದ ಹಸುವನ್ನು ಬೇಟೆಯಾಡಿದ ಸಿಂಹ ಅದನ್ನು ಊರ ಮಧ್ಯೆ ಎಳೆದುಕೊಂಡು ಬಂದಿದೆ. ಇದನ್ನು ಜನರು ನೋಡಿ ಬೆಚ್ಚಿ ಬಿದ್ದಿದ್ದಾರೆ. ಜನರು ಗುಂಪು ಗುಂಪಾಗಿ ಸೇರುತ್ತಿದ್ದಂತೆ ಸಿಂಹ ಅಲ್ಲಿಂದ ಕಾಲ್ಕಿತ್ತಿದೆ. ಗಿರ್ ಅರಣ್ಯ ಪ್ರದೇಶದಿಂದ ಈ ಸಿಂಹ ಗ್ರಾಮಕ್ಕೆ ಬಂದು ದಾಳಿ ಮಾಡಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ.