ಒಂದೇ ನಿಮಿಷದಲ್ಲಿ 150 ತೆಂಗಿನಕಾಯಿ ಒಡೆದು ದಾಖಲೆ ಬರೆದ ಕಾರ್ಮಿಕ: ವಿಡಿಯೋ
ರೋಹ್ಟಕ್(ಹರಿಯಾಣ): ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಧರ್ಮೇಂದ್ರ ಒಂದೇ ನಿಮಿಷದಲ್ಲಿ 150 ತೆಂಗಿನಕಾಯಿಗಳನ್ನು ಒಂದೇ ಕೈಯಿಂದ ಒಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾನೆ. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ತಮ್ಮ ಹೆಸರು ದಾಖಲು ಮಾಡುವ ಉದ್ದೇಶದಿಂದ ಇಷ್ಟೊಂದು ತೆಂಗಿನಕಾಯಿಗಳನ್ನು ಈತ ಒಡೆದಿದ್ದಾನೆ.ಕೋವಿಡ್ ಸಮಯದಲ್ಲಿ ಲಾಕ್ಡೌನ್ ಆಗಿದ್ದಾಗ ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳಬೇಕಾಯ್ತು. ಈ ಸಂದರ್ಭದಲ್ಲಿ ಯೂಟ್ಯೂಬ್ನಲ್ಲಿ ತೆಂಗಿನಕಾಯಿ ಒಡೆಯುವ ವಿಡಿಯೋ ನೋಡುವ ಹವ್ಯಾಸ ಹುಟ್ಟುಕೊಂಡಿತು. ತದನಂತರ ಮನೆಯಲ್ಲೇ ತೆಂಗಿನಕಾಯಿ ಒಡೆಯುವ ಅಭ್ಯಾಸ ಆರಂಭಿಸಿದ್ದಾಗಿ ಧರ್ಮೇಂದ್ರ ತಿಳಿಸಿದ್ದಾನೆ. ಈ ಹಿಂದೆ ಕೇರಳದ ಯುವಕನೋರ್ವ ನಿಮಿಷದಲ್ಲಿ 122 ತೆಂಗಿನಕಾಯಿ ಒಡೆದು ದಾಖಲೆ ನಿರ್ಮಿಸಿದ್ದ. ಇದೀಗ ಆ ದಾಖಲೆ ಬ್ರೇಕ್ ಆಗಿದೆ.