ಗುರುಮಠಕಲ್ನ ಗವಿಸಿದ್ದೇಶ್ವರ ದೇಗುಲ ಜಲಾವೃತ
ಯಾದಗಿರಿ: ಶನಿವಾರ ಸುರಿದ ಭಾರಿ ಮಳೆಗೆ ಗುರುಮಠಕಲ್ ತಾಲೂಕಿನ ಚಿಂತನಹಳ್ಳಿ ಸಮೀಪದ ಗವಿಸಿದ್ದೇಶ್ವರ ದೇಗುಲ ಜಲಾವೃತವಾಗಿದೆ. ದೇವಾಲಯದ ಮೇಲ್ಭಾಗದಿಂದ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ಮಂದಿರ ಮುಳುಗಡೆಯಾಗಿದೆ. ದೇವರ ದರ್ಶನಕ್ಕೆ ಬ್ರೇಕ್ ಹಾಕಲಾಗಿದ್ದು, ಮಂದಿರ ಮುಂಭಾಗದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.