ಕಡಲ ಕಿನಾರೆಯಲ್ಲಿ ಬಾಯಿಯಲ್ಲಿ ನೀರೂರಿಸುವ ಮತ್ಸ್ಯಖಾದ್ಯದ ಆಹಾರ ಮೇಳ - ಆಹಾರ ಮೇಳದಲ್ಲಿ ತರಹೇವಾರಿ ಮೀನುಗಳ ಖಾದ್ಯ
ಮಂಗಳೂರು: ನಗರದ ಚಿತ್ರಾಪುರದ ಕಡಲ ಕಿನಾರೆಯಲ್ಲಿ ಮತ್ಸ್ಯಖಾದ್ಯಗಳ ವಿಶಿಷ್ಟ ಆಹಾರ ಮೇಳವೊಂದು ನಡೆಯುತ್ತಿದೆ. ಈ ಆಹಾರ ಮೇಳದಲ್ಲಿ ತರಹೇವಾರಿ ಮೀನುಗಳ ಖಾದ್ಯವನ್ನು ಮಾಡಲಾಗಿತ್ತು. ಚಿತ್ರಾಪುರದ ಸಮುದ್ರಕಿನಾರೆಯ ಮೊಗವೀರ ಮಹಾಸಭಾ ಮೈದಾನದಲ್ಲಿ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ನೇತೃತ್ವದಲ್ಲಿ ನಡೆದಿರುವ ಶ್ರಮಿಕರ ಸಂಭ್ರಮದ ಕ್ರೀಡಾಕೂಟದಲ್ಲಿ ಈ ಆಹಾರ ಮೇಳವನ್ನು ಆಯೋಜಿಸಲಾಗಿತ್ತು. ಸುಮಾರು 90ರಷ್ಟು ಮಹಿಳೆಯರು ಈ ಮೇಳದಲ್ಲಿ ಭಾಗವಹಿಸಿದ್ದಾರೆ. ನಾಳೆ ಸಹ ಆಹಾರ ಮೇಳ ಜರುಗಲಿದೆ.