'ಸಿಎಂ ಸಿದ್ದರಾಮಯ್ಯ ಬಾಸ್': ಚಿನ್ನದಿಂದ ಬರೆದ ಫಲಕ ಗಿಫ್ಟ್ ನೀಡಿದ ಅಭಿಮಾನಿ - ಸಿದ್ದರಾಮಯ್ಯಗೆ ಚಿನ್ನದಿಂದ ಬರೆದ ಫಲಕ ನೀಡಿದ ಅಭಿಮಾನಿ
ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಅಮೃತ ಮಹೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ಅವರಿಗೆ ಹತ್ತಾರು ಉಡುಗೊರೆಗಳು ಸಿಗುತ್ತಿವೆ. ಬೀದರ್ ಜಿಲ್ಲೆಯ, ಬಾಲ್ಕಿ ತಾಲೂಕಿನ ಕೆ.ಡಿ ಗಣೇಶ್ ಎಂಬುವರು 'ಸಿಎಂ ಸಿದ್ದರಾಮಯ್ಯ ಬಾಸ್' ಎಂದು ಚಿನ್ನದ ಬರಹವಿರುವ ಫಲಕ ಗಿಫ್ಟ್ ನೀಡಿದ್ದಾರೆ. 16 ಗ್ರಾಂ ತೂಕದ ಚಿನ್ನದಲ್ಲಿ ಬರೆಯಲಾಗಿದ್ದು, ಇಂದು ಸಿದ್ದರಾಮಯ್ಯ ನಿವಾಸದಲ್ಲಿ ಅಮೃತ ಮಹೋತ್ಸವ ಸಿದ್ಧತೆ ಸಂಬಂಧ ನಡೆದ ಸಭೆ ಸಂದರ್ಭದಲ್ಲಿ ಅವರು ನೀಡಿದರು. ಈ ವೇಳೆ 'ಹೇ ಎಕ್ಸ್ ಸಿಎಂ' ಎಂದು ಬರೆಸಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿದ್ರು. ಆದ್ರೆ, 'ಇರಲಿ ಅಣ್ಣ, ನೀವು ಎವರ್ ಗ್ರೀನ್ ಸಿಎಂ' ಎಂದು ಅಲ್ಲಿದ್ದ ಅಭಿಮಾನಿಗಳು ಉದ್ಘರಿಸಿದರು. ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ ಸಹ ಕೂಗಿದರು. ಸಿದ್ದರಾಮೋತ್ಸವಕ್ಕೆ ತೆರಳುವವರಿಗೆ ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಕ್ಷಾ ರಾಮಯ್ಯ ಕ್ಯಾಬ್ ವ್ಯವಸ್ಥೆ ಮಾಡಿದ್ದು, ಸ್ವತಃ ಕಾರು ಚಲಾಯಿಸಿ ಚಾಲನೆ ನೀಡಿದರು. ಬೆಂಗಳೂರಿನಿಂದ ದಾವಣಗೆರೆಗೆ ಕರೆದೊಯ್ಯಲು 200 ಕಾರು ಹಾಗೂ 100 ಆಟೋಗಳನ್ನು ವ್ಯವಸ್ಥೆ ಮಾಡಲಾಗಿದೆ.