ಆಂಧ್ರದಲ್ಲಿ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ; ತೈಲ ಸಂಗ್ರಹಕ್ಕಾಗಿ ಜನರ ಪೈಪೋಟಿ- ವಿಡಿಯೋ
ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ನಾರ್ಕಟ್ ಪಲ್ಲಿ-ಅಡ್ಡಂಕಿ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ನಿಯಂತ್ರಣ ತಪ್ಪಿ ಅಡುಗೆ ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದೆ. ಈ ವೇಳೆ ತೈಲ ಸೋರಿಕೆಯಾಗಿ ಮಣ್ಣು ಪಾಲಾಗಿದೆ. ಟ್ಯಾಂಕರ್ ಬಿದ್ದ ಸುದ್ದಿ ಕೇಳಿ ಸುತ್ತಲಿನ ಜನರು ದೌಡಾಯಿಸಿ ಸೋರಿಕೆಯಾಗುತ್ತಿದ್ದ ತೈಲವನ್ನು ಸಿಕ್ಕ ಸಿಕ್ಕ ವಸ್ತುಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದರೂ ಜನರು ಮಾತ್ರ ಕ್ಯಾರೇ ಎಂದಿಲ್ಲ. ಭಾರಿ ಪ್ರಮಾಣದಲ್ಲಿ ಜನರು ಜಮಾಯಿಸಿದ್ದರಿಂದ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.