ಗೂಡಿನಲ್ಲಿ ಸಾಕಿದ್ದ ಪಕ್ಷಿಗಳನ್ನು ನುಂಗಿ ಬುಸುಗುಟ್ಟಿದ ನಾಗಪ್ಪ - A cobra that swallowed a bird in the nest at Shivamogga
ಶಿವಮೊಗ್ಗ: ಮನೆಯ ಗೂಡಿನಲ್ಲಿ ಸಾಕಿದ್ದ ಎರಡು ಪಕ್ಷಿಗಳನ್ನು ಗೂಡಿನೊಳಗೆ ನುಗ್ಗಿದ ನಾಗರ ಹಾವು ನುಂಗಿರುವ ಘಟನೆ ಮುದ್ದಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಜಪ್ಪ ಎಂಬುವರ ಮನೆಯ ಗೂಡಿನಲ್ಲಿದ್ದ ಸಾಕಿದ್ದ ಎರಡು ಮೈನಾ ಹಕ್ಕಿಗಳನ್ನು ನಾಗರಹಾವು ತಿಂದು ಹಾಕಿದ್ದು, ಬಳಿಕ ಗೂಡಿನಿಂದ ಹೊರ ಬಾರಲು ಆಗದೇ ಒದ್ದಾಡುತ್ತಿರುವಾಗ ಮನೆಯವರು ಹಾವನ್ನು ಕಂಡು, ತಕ್ಷಣ ಸ್ನೇಕ್ ಕಿರಣ್ ಗೆ ಪೋನ್ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಸ್ನೇಕ್ ಕಿರಣ್ ಅವರು ಹಾವು ನುಗ್ಗಿದ್ದ ಗೂಡನ್ನು ಮನೆಯಿಂದ ಹೊರ ತಂದಿದ್ದು, ಹಾವನ್ನು ಗೂಡಿನಿಂದ ಹೊರ ಹಾಕುತ್ತಿದ್ದಂತಯೇ ನುಂಗಿದ್ದ ಎರಡು ಪಕ್ಷಿಗಳನ್ನು ಬಾಯಿಯಿಂದ ಹೊರಗೆ ಹಾಕಿದೆ. ಬಳಿಕ ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.