ಆಂಧ್ರಪ್ರದೇಶದಲ್ಲಿ ಪ್ರವಾಹದ ರಭಸಕ್ಕೆ ಕೊಚ್ಚಿಹೋದ ಕಾರು.. ಚಾಲಕನ ರಕ್ಷಿಸಿದ ಜನ - ಆಂಧ್ರಪ್ರದೇಶದ ಕೊಯ್ಯಲಗುಡೆಂನಲ್ಲಿ ಕೊಚ್ಚಿ ಹೋದ ಕಾರು
ಆಂಧ್ರಪ್ರದೇಶ ರಾಜ್ಯದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಅಲ್ಲದೇ, ರಸ್ತೆಗಳ ಮೇಲೆ ನೀರು ಉಕ್ಕುತ್ತಿದೆ. ಪರಿಣಾಮ, ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಎಲ್ಲೂರು ಜಿಲ್ಲೆಯ ಕೊಯ್ಯಲಗುಡೆಂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಇದೇ ವೇಳೆ ಕನ್ನಪುರಂನಲ್ಲಿ ಬರುತ್ತಿದ್ದ ಕಾರೊಂದು ಇಂಜಿನ್ ಕೆಟ್ಟು ರಸ್ತೆಯಲ್ಲಿ ಸಿಲುಕಿಕೊಂಡಿತ್ತು. ಕಾರಿನಲ್ಲಿದ್ದ ಚಾಲಕನನ್ನು ಸ್ಥಳೀಯರು ರಕ್ಷಿಸಿದ್ದಾರೆ. ನೀರಿನ ರಭಸ ಹೆಚ್ಚಿದ್ದರಿಂದ ಕಾರು ಕೊಚ್ಚಿ ಹೋಗಿದೆ.