ಬಂಡೀಪುರದ ನಡು ರಸ್ತೆಯಲ್ಲಿ ಅಂಗಾತ ಮಲಗಿದ ಜಾಂಬವಂತ.. ಕರಡಿ ಚಿನ್ನಾಟದ ವಿಡಿಯೋ ವೈರಲ್ - ವೈರಲ್ ವೀಡಿಯೋ
ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬಂತೆ ಕರಡಿಯೊಂದು ಡಾಂಬರ್ ರಸ್ತೆಯಲ್ಲಿ ಅದೂ ನಡು ರಸ್ತೆಯಲ್ಲಿ ಅಂಗಾತ ಮಲಗಿದ್ದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಮೀಪ ನಡೆದಿದೆ. ರಸ್ತೆ ಮಧ್ಯೆ ಅಂಗಾತ ಮಲಗಿ ರಿಲ್ಯಾಕ್ಸ್ ಮೂಡಲ್ಲಿ ಇದ್ದುದರಿಂದ ಕಾರಿನಲ್ಲಿದ್ದ ಪ್ರವಾಸಿಗರು ಕರಡಿ ಚಿನ್ನಾಟ ಕಣ್ತುಂಬಿಕೊಂಡಿದ್ದಾರೆ. ಘಟನೆ ಯಾವಾಗ ಆಯಿತೆಂಬ ಖಚಿತತೆ ಇಲ್ಲ, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜಾಂಬವಂತನ ವಿಡಿಯೋ ವೈರಲ್ಲಾಗಿದೆ.