ವಿಡಿಯೋ: ಮಗುವಿನ ಮೈಮೇಲೆ ಹರಿಯಿತು ಕಾರು: ಚಾಲಕನ ನಿರ್ಲಕ್ಷ್ಯಕ್ಕೆ ಪುಟ್ಟ ಬಾಲಕಿ ಸಾವು - ಈಟಿವಿ ಭಾರತ ಕರ್ನಾಟಕ
ಪ್ರಯಾಗ್ರಾಜ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿರುವ ಭೀಕರ ಅಪಘಾತದ ವಿಡಿಯೋ ತುಣುಕವೊಂದು ವೈರಲ್ ಆಗ್ತಿದೆ. ಆಟೋದಿಂದ ಇಳಿದು ಕೆಳಗೆ ನಿಂತಿದ್ದ ಬಾಲಕಿಯೋರ್ವಳ ಮೇಲೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದ್ದು, ಆಕೆಯ ಮೇಲೆ ಹರಿದಿದೆ. ಘಟನೆಯಿಂದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆ ಬೆನ್ನಲ್ಲೇ ಕಾರು ಚಾಲಕನಿಗೆ ಸ್ಥಳೀಯರು ತೀವ್ರವಾಗಿ ಥಳಿಸಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಪೊಲೀಸರು ಬರುವ ಮುನ್ನವೇ ಆತ ಪರಾರಿಯಾಗಿದ್ದಾನೆ. ಪ್ರಯಾಗ್ರಾಜ್ನ ಕರ್ಚನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಅಳವಡಿಕೆ ಮಾಡಲಾಗಿದ್ದ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.