ವಿಡಿಯೋ: ಹವಾಮಾನ ವೈಪರೀತ್ಯ.. 700 ಎಕರೆ ಭತ್ತದ ಬೆಳೆ ನಾಶ ಮಾಡಿದ ರೈತರು - Etv bharat kannada
ಪಠಾಣ್ಕೋಟ್(ಪಂಜಾಬ್): ಹವಾಮಾನ ವೈಪರೀತ್ಯದಿಂದಾಗಿ ನೂರಾರು ಎಕರೆಯಲ್ಲಿನ ಭತ್ತ ಹಾನಿಯಾಗಿದೆ. ಹೀಗಾಗಿ, ರೈತರು ಸುಮಾರು 700 ಎಕರೆ ಭತ್ತದ ಬೆಳೆ ನಾಶ ಮಾಡಿದ್ದಾರೆ. ಭತ್ತದ ಗದ್ದೆಗಳಲ್ಲಿ ಟ್ರ್ಯಾಕ್ಟರ್ ರೂಟರ್ ಮೂಲಕ ಬೆಳೆ ನಾಶ ಮಾಡಲಾಗಿದೆ. ಪಂಜಾಬ್ನ ಪಠಾಣ್ಕೋಟ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸುಮಾರು 700 ಎಕರೆ ಭತ್ತದ ಬೆಳೆ ನಾಶವಾಗಿದೆ. ಇದರ ಬೆನ್ನಲ್ಲೇ ಸರ್ಕಾರ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೃಷಿ ಇಲಾಖೆ ಅಧಿಕಾರಿ ಅಮ್ರಿಕ್ ಸಿಂಗ್, ಹವಾಮಾನ ವೈಪರೀತ್ಯದಿಂದಾಗಿ ಭತ್ತದ ಬೆಳೆಗೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.