ಸಿಎಂ ಏಕನಾಥ್ ಶಿಂದೆ ಭೇಟಿ ಮಾಡಿದ ಶಿವಸೇನೆಯ 66 ಕಾರ್ಪೋರೇಟರ್ಸ್.. ಬಂಡಾಯ ಗುಂಪಿಗೆ ಸೇರ್ಪಡೆ - ಶಿವಸೇನೆಯ ಏಕನಾಥ್ ಶಿಂದೆ
ಥಾಣೆ(ಮಹಾರಾಷ್ಟ್ರ): ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಬಿಜೆಪಿ+ಬಂಡಾಯ ಶಿವಸೇನೆ ಮೈತ್ರಿ ಸರ್ಕಾರ ರಚನೆಯಾಗಿದೆ. ಮುಖ್ಯಮಂತ್ರಿಯಾಗಿ ಶಿವಸೇನೆಯ ಏಕನಾಥ್ ಶಿಂದೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇದರ ಬೆನ್ನಲ್ಲೇ ಥಾಣೆ ಮಹಾನಗರ ಪಾಲಿಕೆಯ 66 ಕಾರ್ಪೋರೇಟರ್ ಮುಖ್ಯಮಂತ್ರಿಯನ್ನ ಭೇಟಿ ಮಾಡಿದರು. ಥಾಣೆ ಮಹಾನಗರ ಪಾಲಿಕೆಯ 67 ಕಾರ್ಪೋರೇಟರ್ಗಳ ಪೈಕಿ 66 ಮಂದಿ ನಿನ್ನೆ ರಾತ್ರಿ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ನಂದನವನ ಬಂಗಲೆಯಲ್ಲಿ ಭೇಟಿ ಮಾಡಿದ್ದು, ಈ ವೇಳೆ ಸಿಎಂ ಗುಂಪಿಗೆ ಸೇರ್ಪಡೆಗೊಂಡರು. ಈ ಹಿಂದಿನಿಂದಲೂ ಥಾಣೆಯಲ್ಲಿ ಏಕನಾಥ್ ಶಿಂದೆ ಫಾಲೋವರ್ಸ್ ಹೆಚ್ಚಾಗಿದ್ದು, ಇದೀಗ ಶಿವಸೇನೆಯ 66 ಕಾರ್ಪೋರೇಟರ್ ಸಿಎಂಗೆ ಸಾಥ್ ನೀಡಿದ್ದಾರೆ.