ಕರ್ನಾಟಕ

karnataka

ETV Bharat / videos

ಕೆಸರುಗದ್ದೆ ಮಧ್ಯೆ ಕೆಸರಿನೋಕುಳಿ.. ಸಾಹಸಮಯ ಆಟಗಳಲ್ಲಿ ಮಿಂದೆದ್ದ ಸ್ಪರ್ಧಿಗಳು - Kesaru Gadde Games

By

Published : Jul 25, 2022, 12:54 PM IST

ಕೊಡಗು : ಮಡಿಕೇರಿ ಸಮೀಪದ ಕಗ್ಗೋಡು ಬೋಪಯ್ಯ ಎಂಬವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ 30ನೇ ವರ್ಷದ ರಾಜ್ಯಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು, ಯುವಕ ಯುವತಿಯರು, ಪುರುಷರು ಸೇರಿದಂತೆ ಮಹಿಳೆಯರೂ ಕೆಸರಿನಲ್ಲಿ ಸಾಹಸಮಯ ಆಟಗಳನ್ನು ಆಡಿರುವ ವಿಡಿಯೋ ಝಲಕ್​ ಇಲ್ಲಿದೆ. ಕಳೆದ 3 ವರ್ಷಗಳಿಂದ ಕೊರೊನಾ ಕಾರಣದಿಂದ ಬ್ರೇಕ್​ ಬಿದ್ದಿದ್ದ ಕೆಸರುಗದ್ದೆ ಆಟಕ್ಕೆ ಈ ಬಾರಿ ಮಡಿಕೇರಿ, ಸುಳ್ಯ, ಸಂಪಾಜೆ, ಕೋಡ್ಲಿಪೇಟೆ, ಸೋಮವಾರಪೇಟೆ, ಕೂಡಿಗೆ ಸೇರಿದಂತೆ ವಿವಿಧ ಭಾಗಗಳಿಂದ‌ 40ಕ್ಕೂ ಹೆಚ್ಚು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಇನ್ನಷ್ಟು ಕಳೆ ನೀಡಿತ್ತು. ಮಕ್ಕಳಿಗೆ ಕೆಸರಿನಾಟವಾದರೆ, ಹಗ್ಗಜಗ್ಗಾಟ, ತ್ರೋಬಾಲ್​, ವಾಲಿಬಾಲ್​ ಆಟಗಳೊಂದಿಗೆ ಕಸರಿನಲ್ಲಿ ಸೆಣಸಾಡುತ್ತಿದ್ದ ಆಟಗಾರರ ಉತ್ಸಾಹ ನೋಡುಗರಿಗೆ ಭರಪೂರ ಮನೋರಂಜನೆ ನೀಡಿದರೆ ಆಟಗಾರರಿಗೆ ಮಳೆಗಾಲದ ಚಳಿಯಲ್ಲಿಯೂ ಬೆವರಿಳಿಯುವಂತೆ ಮಾಡಿತ್ತು.

ABOUT THE AUTHOR

...view details