ಗೋಡೆ ನಡುವೆ ಸಿಲುಕಿಕೊಂಡು ಹೊರಬರಲಾಗದೇ ಒದ್ದಾಡಿದ ಕಳ್ಳ!; ವಿಡಿಯೋ ನೋಡಿ - ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆ
ಶ್ರೀಕಾಕುಳಂ (ಆಂಧ್ರ ಪ್ರದೇಶ): ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಖದೀಮನೊಬ್ಬ ಗೋಡೆಯ ನಡುವೆ ಸಿಲುಕಿಕೊಂಡು ಹೊರಬರಲಾಗದೇ ಒದ್ದಾಡಿರುವ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ. ಜಾದುಪುಡಿ ಗ್ರಾಮದ ಜಾಮಿ ಎಲ್ಲಮ್ಮ ದೇವಸ್ಥಾನಕ್ಕೆ ನುಗ್ಗಿ ಚಿನ್ನ ಮತ್ತು ಬೆಳ್ಳಿ ಸಾಮಗ್ರಿಗಳನ್ನು ಕದ್ದಿದ್ದಾನೆ. ನಂತರ ದೇವಸ್ಥಾನದ ಗೋಡೆಯಲ್ಲಿದ್ದ ಕಿಟಕಿಯಂತಹ ರಂಧ್ರದಿಂದ ಹೊರಬರಲು ಯತ್ನಿಸಿದ್ದಾನೆ. ಆದರೆ, ಅರ್ಧ ದೇಹ ಮಾತ್ರ ಹೊರ ಬಂದು ಅಲ್ಲಿಯೇ ಸಿಲುಕಿಕೊಂಡಿದ್ದಾನೆ. ಇದೇ ವೇಳೆ, ಗ್ರಾಮಸ್ಥರು ಬಂದು ಕಳ್ಳನನ್ನು ಹಿಡಿದಿದ್ದಾರೆ. ಈತನನ್ನು ಪಾಪರೋ ಎಂದು ಗುರುತಿಸಲಾಗಿದ್ದು, ತನ್ನನ್ನು ಹೊರಗೆ ಎಳೆಯಿರಿ ಎಂದು ಗ್ರಾಮಸ್ಥರು ಬಳಿ ಅಂಗಲಾಚಿರುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ.
Last Updated : Feb 3, 2023, 8:22 PM IST