ಅಣ್ಣಾಮಲೈ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ: ಕೋರ್ಟ್ನಲ್ಲಿ ಎದುರಿಸಲು ಸಿದ್ಧ ಎಂದ ತ.ನಾಡು ಬಿಜೆಪಿ ಅಧ್ಯಕ್ಷ - ಅಣ್ಣಾಮಲೈ ವಿರುದ್ಧ ಮಾನನಷ್ಟ ಮೊಕದ್ದಮೆ
ಚೆನ್ನೈ(ತಮಿಳುನಾಡು): ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿರುದ್ಧ ಮಾನಹಾನಿಕಾರಕ ಹೇಳಿಕೆ ನೀಡಿರುವ ಆರೋಪದಡಿ ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಈಗಾಗಲೇ ಡಿಎಂಕೆ ಪಕ್ಷದಿಂದ ನೋಟಿಸ್ ಸಹ ಜಾರಿಯಾಗಿದ್ದು, ಈ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಅಧಿಕಾರದಲ್ಲಿರುವ ಪಕ್ಷ ನಾವು ಕೇಳುವ ಪ್ರಶ್ನೆಗಳನ್ನ ಎದುರಿಸಲು ಸಿದ್ಧವಿಲ್ಲದ ಸಂದರ್ಭದಲ್ಲಿ ಮಾನನಷ್ಟ ಮೊಕದ್ದಮೆ ಹಾಕುತ್ತಾರೆ. ಡಿಎಂಕೆ ಪಕ್ಷದ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಸೇರಿ ಇಲ್ಲಿಯವರೆಗೆ ನನ್ನ ವಿರುದ್ಧ 610 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಾಗಿವೆ. ಬಿಜೆಪಿಯನ್ನು ಎದುರಿಸಲು ಡಿಎಂಕೆ ಹೆದರುತ್ತಿದೆ. ನನ್ನ ವಿರುದ್ಧ ದಾಖಲಾಗಿರುವ ಕೇಸ್ಗೆ ಹೆದರುವುದಿಲ್ಲ, ನ್ಯಾಯಾಲಯದಲ್ಲಿ ಎದುರಿಸಲು ಸಿದ್ಧನಿದ್ದೇನೆ ಎಂದಿದ್ದಾರೆ.
Last Updated : Feb 3, 2023, 8:21 PM IST