ಜಿ.ಪಂ.ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣ: ಸಿಬಿಐ ಅಧಿಕಾರಿಗಳಿಂದ ಮಹೇಶ್ ಶೆಟ್ಟಿ ವಿಚಾರಣೆ - ಧಾರವಾಡದ ಕೆಐಡಿಬಿ ಲೇಔಟ್
ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದ ಹೊಟೇಲ್ ಉದ್ಯಮಿ ಮಹೇಶ್ ಶೆಟ್ಟಿ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಧಾರವಾಡದ ಕೆಐಡಿಬಿ ಲೇಔಟ್ನಲ್ಲಿರುವ ಉದ್ಯಮಿ ಮಹೇಶ್ ಶೆಟ್ಟಿ ಅವರ ಮನೆಗೆ ಆಗಮಿಸಿದ ಮೂವರುಸಿಬಿಐ ಅಧಿಕಾರಿಗಳುಮನೆಯಲ್ಲಿಯೇ ಮಹೇಶ್ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದ್ದಾರೆ. ಕಾಂಗ್ರೆಸ್ನಲ್ಲೂ ಗುರುತಿಸಿಕೊಂಡಿದ್ದ ಮಹೇಶ್ ಶೆಟ್ಟಿ ಪ್ರಕರಣದಲ್ಲಿ ರಾಜಿ ಸಂಧಾನ ನಡೆಸಲು ಯತ್ನಿಸಿದ್ದರು ಅನ್ನೋ ಆರೋಪ ಅಂದು ಕೇಳಿಬಂದಿತ್ತು. ಈ ಹಿನ್ನೆಲೆ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.