ಸಾಂಸ್ಕೃತಿಕ ನಗರಿಯಲ್ಲಿ ಯುವಸಂಭ್ರಮ... ಮನಮೋಹಕ ನೃತ್ಯದೊಂದಿಗೆ ದೇಶ ಪ್ರೇಮದ ಸಿಂಚನ - ನೃತ್ಯದೊಂದಿಗೆ ದೇಶ ಪ್ರೇಮದ ಸಿಂಚನ
ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವಸಂಭ್ರಮ 8ನೇ ದಿನ ಕಾವೇರಿ ಪ್ರಕೃತಿ ಮಾತೆಯದು ಅದು ಯಾರ ಸತ್ತು ಅಲ್ಲ.ಅದಕ್ಕಾಗಿ ಗಲಾಟೆ ಬೇಡ ಸಾರಿತು ಮದ್ದೂರು ಮಹಿಳಾ ಸರ್ಕಾರಿ ಕಾಲೇಜು ತಂಡ. ಕೊಳ್ಳೆಗಾಲ ತಾಲೂಕಿನ ಜೆಎಸ್ಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ತಂಡ 'ಹುಟ್ಟಿದರೇ ಕನ್ನಡ ನಾಡಲಿ ಹುಟ್ಟಬೇಕು,ಮೆಟ್ಟಿದರೆ ಕನ್ನಡನಾಡಿನಲ್ಲಿ ಮೆಟ್ಟಬೇಕು,ಕನ್ನಡ ಝೇಂಕಾರ ಪಸರಿಸಿ, ಪ್ಲಾಸ್ಟಿಕ್ ಮುಕ್ತ-ಲಂಚ ಮುಕ್ತ ದೇಶ ಮಾಡಿ, ಪರಿಸರ ಎಂದು ನೃತ್ಯದ ಮೂಲಕ ಸಂದೇಶ ನೀಡಿದರು.ಹುಣಸೂರು ತಾಲ್ಲೂಕಿನ ಡಿ.ದೇವರಾಜ ಅರಸು ಪ್ರಥಮದರ್ಜೆ ಕಾಲೇಜಿನ ತಂಡ ಸೈನಿಕರ ಕುರಿತಾಗಿ ದೇಶ ಪ್ರೇಮದ ಸಿಂಚನ ಸುರಿದರು. ಹೀಗೆ ಅನೇಕ ಕಾಲೇಜು ಪರಿಸರ, ದೇಶ ಭಕ್ತಿ, ಜಾನಪದ ಗೀತೆ ಹಾಡಿಗಳಿಗೆ ನೃತ್ಯ ಮಾಡಿದರು.ಕನ್ನಡ ನಾಡಿನ ಜೀವನದಿ ಈ ಕಾವೇರಿ,ಅನ್ನ ನೀಡುವ ದೇವನದಿ ಈ ವೈಯಾರಿ...ಹೀಗೆ ಮದ್ದೂರು ಮಹಿಳಾ ಸರ್ಕಾರಿ ಕಾಲೇಜು ತಂಡ ಕಾವೇರಿನ ಕೂಗಿ ನೃತ್ಯದ ಮೂಲಕ ಕರೆಯುತ್ತಿದ್ದಾರೆ. ನೆರೆದಿದ್ದ ಯುವಸಮೂಹ ಝುಳು ಝುಳು ನಿನಾದದಂತೆ ಹೆಜ್ಜೆ ಹಾಕುತ್ತ ಕುಣಿದ ಕುಪ್ಪಳಿಸಿದರು.