ಲಸಿಕೆಗಾಗಿ ಮಂಡ್ಯದ ಮಿಮ್ಸ್ ಮುಂಭಾಗ ಯುವಜನತೆ ಕ್ಯೂ - Mandya latest update news
ಮಂಡ್ಯ: ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ತಾತ್ಕಾಲಿಕ ಸ್ಥಗಿತ ಹಿನ್ನೆಲೆ ಇಂದು ಲಸಿಕೆ ಹಾಕಿಸಿಕೊಳ್ಳಲು ಯುವ ಜನತೆ ಕ್ಯೂ ನಿಂತಿದ್ದಾರೆ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಂಡು ಮಂಡ್ಯದ ಮಿಮ್ಸ್ ಆಸ್ಪತ್ರೆಯ ಮುಂಭಾಗ ಇಂದೇ ಲಸಿಕೆ ಪಡೆಯಬೇಕೆಂದು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಲಸಿಕೆಗಾಗಿ ನೋಂದಾಯಿಸಿಕೊಳ್ಳುವ ಆನ್‌ಲೈನ್ ಪ್ರಕ್ರಿಯೆ ಸುಲಭಗೊಳಿಸಬೇಕು. ಅಲ್ಲದೇ ಲಸಿಕೆ ನೀಡುವುದನ್ನ ನಿಲ್ಲಿಸದೆ ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕು ಎಂದು ಯುವಜನತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.