ತಂದೆ ತಾಯಿಗೆ ಕಿರುಕುಳ ನೀಡುತ್ತಿದ್ದ ಅಣ್ಣನನ್ನೇ ಕೊಂದ ತಮ್ಮ - ಹಾವೇರಿ ಕೊಲೆ ಸುದ್ದಿ
ಹಾವೇರಿ: ತಂದೆ ತಾಯಿಗೆ ಕಿರುಕುಳ ನೀಡುತ್ತಿದ್ದ ಅಣ್ಣನನ್ನ ತಮ್ಮನೇ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ನಡೆದಿದೆ. 22 ವರ್ಷದ ನಾಗರಾಜ ಗೊರವರ ಕೊಲೆಯಾದ ಯುವಕ. ನಾಗರಾಜನನ್ನ ಆತನ ತಮ್ಮ ಡಿಳ್ಳೆಪ್ಪ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿರುವ ಆರೋಪಿ 20 ವರ್ಷದ ಡಿಳ್ಳೆಪ್ಪ ಬ್ಯಾಡಗಿ ಪೊಲೀಸರಿಗೆ ಶರಣಾಗಿದ್ದಾನೆ. ನಾಗರಾಜ ಪ್ರತಿದಿನ ಕುಡಿದು ಬಂದಿ ತಂದೆ ತಾಯಿ ಹಿಂಸಿಸುತ್ತಿದ್ದ ಇದರಿಂದ ಬೇಸತ್ತು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ನಾಗರಾಜನಿಗೆ ಮದ್ಯಪಾನ ಚಟವಿತ್ತು. ಮದ್ಯಪಾನ ಮಾಡಿಬಂದು ತಂದೆ ತಾಯಿಗೆ ಕಿರುಕುಳ ನೀಡುತ್ತಿದ್ದ. ಹೀಗೆ ತಂದೆ ತಾಯಿಗೆ ಕಿರುಕುಳ ನೀಡುತ್ತಿರುವುದನ್ನು ಕಂಡ ಸಹೋದರ ಡಿಳ್ಳೆಪ್ಪ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾನೆ. ನಾಗರಾಜ ಗೊರವರ 2018ರಲ್ಲಿ ರೇಪ್ ಪ್ರಕರಣದಲ್ಲಿ ಜೈಲುಪಾಲಾಗಿದ್ದ. ಆ ಸಂದರ್ಭದಲ್ಲಿ ನಾಗರಾಜನ ತಂದೆ ತಾಯಿ ರೇಪ್‌ಗೆ ಒಳಗಾದ ಸಂತ್ರಸ್ತೆಯ ಮನವೊಲೈಸಿ ಪ್ರಕರಣ ರಾಜಿ ಮಾಡಿಕೊಂಡಿದ್ದರು. ಅಲ್ಲದೆ ಅದಕ್ಕಾಗಿ 7 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಆದರೂ ಸಹ ನಾಗರಾಜ ಗೊರವರ ತಂದೆ ತಾಯಿಗೆ ಕಿರುಕುಳ ನೀಡುತ್ತಿದ್ದ. ಈ ಸಂದರ್ಭದಲ್ಲಿ ನಾಗರಾಜ ಸಹೋದರ ಡಿಳ್ಳೆಪ್ಪ ಬುದ್ದಿಹೇಳಿದ್ದಾನೆ. ನಾಗರಾಜ ತಮ್ಮ ಡಿಳ್ಳೆಪ್ಪನಿಗೆ ಮಾರಾಕಾಸ್ತ್ರಗಳಿಂದ ಹೊಡೆಯುವ ಹೆದರಿಕೆ ಹಾಕಿದ್ದಾನೆ. ಇದರಿಂದ ಬೇಸತ್ತ ಡಿಳ್ಳೆಪ್ಪ ಅಣ್ಣ ನಾಗರಾಜನನ್ನ ಕೊಲೆ ಮಾಡಿದ್ದಾನೆ. ಅಣ್ಣನನ್ನ ಕೊಲೆ ಮಾಡಿ ಸ್ಟೇಷನ್‌ಗೆ ತೆರಳುತ್ತಿದ್ದ ಡಿಳ್ಳೆಪ್ಪನನ್ನ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.