ಜೀವದ ಹಂಗು ತೊರೆದು ಎತ್ತನ್ನು ಬದುಕಿಸಿದ ಯುವಕರು - ಗ್ರಾಮಸ್ಥರ ಪ್ರಶಂಸೆಗೆ ಪಾತ್ರ
ಮಳೆಯ ಆರ್ಭಟಕ್ಕೆ ತತ್ತರಿಸಿ ಹೋಗಿರುವ ಬೆಳಗಾವಿ ಜಿಲ್ಲೆಯಲ್ಲಿ ಪ್ರಾಣದ ಹಂಗು ತೊರೆದು ಇಬ್ಬರು ಯುವಕರು ಎತ್ತು ಬದುಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಖಾನಾಪುರ ತಾಲೂಕಿನ ಅಂಬೇವಾಡಿ ಗ್ರಾಮ ಜಲಾವೃತವಾಗಿದೆ. ಕುತ್ತಿಗೆವರೆಗಿನ ನೀರಲ್ಲಿ ಹಗ್ಗದ ಸಹಾಯದಿಂದ ಎತ್ತನ್ನ ನದಿ ದಾಟಿಸಿದವಲ್ಲಿ ಇಬ್ಬರು ಯುವಕರು ಯಶಸ್ವಿಯಾಗಿದ್ದು, ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.