ತುಂಬಿ ಹರಿಯುವ ನೇತ್ರಾವತಿಯಲ್ಲಿ ಯುವಕರ ಅಪಾಯಕಾರಿ ಸಾಹಸ :ವಿಡಿಯೋ ವೈರಲ್ - Mangaluru
ಮಂಗಳೂರು: ಭಾರಿ ಮಳೆಯಿಂದ ನೇತ್ರಾವತಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದರೆ ಅದೇ ನದಿಯಲ್ಲಿ ಯುವಕರ ತಂಡವೊಂದು ಅಪಾಯಕಾರಿ ಸಾಹಸ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು ಪಾಣೆಮಂಗಳೂರು ಹಳೆ ಸೇತುವೆಯ ಗೂಡಿನಬಳಿ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು, ಅದರಲ್ಲಿ ಈಜು ಬಲ್ಲ ಸ್ಥಳೀಯ ಯುವಕರ ತಂಡ ಸೇತುವೆಯ ಮೇಲ್ಬಾಗದಲ್ಲಿ ನಿಂತು ನದಿಗೆ ಹಾರಿ ಈಜಾಡುತ್ತಿದ್ದಾರೆ. ಅಪಾಯಕಾರಿ ದುಸ್ಸಾಹಸದ ದೃಶ್ಯಗಳು ಎಲ್ಲಡೆ ವೈರಲ್ ಆಗಿದೆ.