ಕೆರೆಯಲ್ಲಿ ಮುಳುಗುತ್ತಿದ್ದ ಯುವಕನ ಪ್ರಾಣ ರಕ್ಷಿಸಿದ ಶಾಸಕ, ಮಾಜಿ ಸಂಸದ - ಶಾಸಕ ಸುರೇಶ್ ಗೌಡ, ಮಾಜಿ ಸಂಸದ ಶಿವರಾಮೇಗೌಡ
ಯುವಕನ ಹುಚ್ಚಾಟಕ್ಕೆ ಶಾಸಕ, ಮಾಜಿ ಸಂಸದರು ಬೆಸ್ತುಬಿದ್ದ ಘಟನೆ ನಾಗಮಂಗಲ ತಾಲ್ಲೂಕಿನ ಬಿಂಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸುಮಾರು 20 ವರ್ಷಗಳ ನಂತರ ಬಿಂಡೇನಹಳ್ಳಿ ಕೆರೆ ತುಂಬಿದೆ. ಕೆರೆ ತುಂಬಿದ ಸಂತೋಷಕ್ಕೆ ಜನತೆ ದೇವರ ಪೂಜೆ ನಡೆಸಿ ತೆಪ್ಪೋತ್ಸವ ನಡೆಸುತ್ತಿದ್ದರು. ಬೆಂಗಳೂರಿನಿಂದ ಈ ತೆಪ್ಪೋತ್ಸವಕ್ಕೆ ಆಗಮಿಸಿದ್ದ ಅಭಿ ಎಂಬ ಯುವಕ ಈಜಲು ಕೆರೆಗೆ ಇಳಿದು ಈಜು ಬಾರದೆ ನೀರಿನಲ್ಲಿ ಮುಳುಗುತ್ತಿದ್ದ. ಈ ಸಂದರ್ಭದಲ್ಲಿ ಕಾಪಾಡಿ, ಕಾಪಾಡಿ ಎಂದು ಕೂಗುತ್ತಿದ್ದಂತೆ ತೆಪ್ಪೋತ್ಸವದಲ್ಲಿ ಪಾಲ್ಗೊಂಡಿದ್ದ ಶಾಸಕ ಸುರೇಶ್ ಗೌಡ, ಮಾಜಿ ಸಂಸದ ಶಿವರಾಮೇಗೌಡರು ಹಾಗೂ ಸ್ಥಳದಲ್ಲೇ ಇದ್ದ ಜನತೆ ತೆಪ್ಪವನ್ನು ವಾಪಸ್ ಕರೆಸಿ ಯುವಕನ ರಕ್ಷಣೆ ಮಾಡಿದ್ದಾರೆ.