ಬೈಕ್-ಟಂಟಂ ಆಟೋ ಮಧ್ಯೆ ಡಿಕ್ಕಿ... ಸ್ಥಳದಲ್ಲೇ ಪ್ರಾಣ ಬಿಟ್ಟ ಯುವಕ, ಐವರಿಗೆ ಗಾಯ! - ರಾಯಚೂರು ಅಪಘಾತ,
ಬೈಕ್-ಟಂಟಂ ಆಟೋ ಮಧ್ಯ ಡಿಕ್ಕಿ ಸಂಭವಿಸಿ ಯುವಕನೊಬ್ಬ ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ ರಾಯಚೂರಿನ ಹೊರವಲಯದ ಮಲಿಯಾಬಾದ್ ಕ್ರಾಸ್ ಬಳಿ ಸಂಭವಿಸಿದೆ. ಅನಿಲ್ ಕುಮಾರ್ (18) ಮೃತ ಯುವಕನೆಂದು ಗುರುತಿಸಲಾಗಿದೆ. ಬೈಕ್ ಸವಾರ ಹಾಗೂ ಟಂಟಂ ಆಟೋದಲ್ಲಿರುವ ಐವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಂಟಂ ಆಟೋ ರಾಯಚೂರಿನಿಂದ ದೇವನಪಲ್ಲಿಗೆ ತೆರಳುತ್ತಿತ್ತು. ಈ ವೇಳೆ ಬೈಕ್ ಹಾಗೂ ಟಂಟಂ ಆಟೋ ಮಧ್ಯ ಪರಸ್ಪರ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಈ ಕುರಿತು ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.