ಮೌಢ್ಯತೆಗೆ ಸಡ್ಡು: ಸ್ಮಶಾನದಲ್ಲೇ ಕೇಕ್ ಕತ್ತರಿಸಿ 'ಬರ್ತ್ಡೇ' ಆಚರಿಸಿಕೊಂಡ ಭೂಪ!
ಗುಜರಾತ್‌ನ ಭಾವನಗರದ ಯುವಕನೊಬ್ಬ ಕಾಳಿ ಕಾಡಲ್ ಸ್ಮಶಾನದಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಅಚ್ಚರಿ ಮೂಡಿಸಿದ್ದಾನೆ. ಭಾವನಗರದ ಚಿತ್ರ ಪ್ರದೇಶದಲ್ಲಿ ವಾಸಿಸುವ ಹಿಟೆನ್, ಕಂಪ್ಯೂಟರ್ ತರಗತಿ ಮತ್ತು ವಿಡಿಯೋ ಎಡಿಟಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. ದೆವ್ವಗಳನ್ನು ನಂಬದೇ ವಿಚಾರವಾದಿ ಆಗಿರುವ ಇವರು, ಸ್ಮಶಾನದಲ್ಲಿ ಕೇಕ್ ಕತ್ತರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಈ ಸಂಭ್ರಮಕ್ಕೆ ಈತನ ಸ್ನೇಹಿತರು ಸಾಕ್ಷಿಯಾಗಿದ್ದಾರೆ.