ಕಲಘಟಗಿ: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು - Young man drowns
ಕಲಘಟಗಿ : ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದ ಕುರಡಿ ಕೆರೆಯಲ್ಲಿ ಯುವಕನೊಬ್ಬ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಇಂದು (ಶನಿವಾರ) ಸಾಯಂಕಾಲ ಜರುಗಿದೆ. ಶಿವಪ್ಪ ರಾಮಪ್ಪ ಬಡಪ್ಪನವರ (20) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಶಿವಪ್ಪ ಹೊಲಕ್ಕೆ ಹೋಗಿ ಬರುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದಿದ್ದಾನೆ ಎನ್ನಲಾಗುತ್ತಿದೆ. ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಮೃತ ವ್ಯಕ್ತಿಗಾಗಿ ಶೋಧ ನಡೆಸಿದ್ದಾರೆ.