ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಆಪ್ತನನ್ನು ಕರೆತಂದ ಸಿಬಿಐ ಅಧಿಕಾರಿಗಳು! - ವಿನಯ ಕುಲಕರ್ಣಿ ಆಪ್ತ ವಶ ಸುದ್ದಿ,
ಧಾರವಾಡ: ಹೆಬ್ಬಳ್ಳಿ ಜಿಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಸಿಬಿಐ ತನಿಖೆ ವಿಚಾರಣೆ ಚುರುಕುಗೊಂಡಿದ್ದು, ಇದೀಗ ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತನ ವಿಚಾರಣೆಗಾಗಿ ಸಿಬಿಐ ವಶಕ್ಕೆ ಪಡೆದುಕೊಂಡಿದೆ. ಹುಬ್ಬಳ್ಳಿ ಮೂಲದ ಶ್ರೀ ಪಾಟೀಲ್ನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗಾಗಿ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಈಗಾಗಲೇ ಮಾಜಿ ಸಚಿವ ವಿನಯ್ ಕುಲಕರ್ಣಿ, ಮಾಜಿ ಸಚಿವರ ಸಹೋದರ ವಿಜಯ್ ಕುಲಕರ್ಣಿ ಹಾಗೂ ವಿನಯ್ ಆಪ್ತ ಶ್ರೀ ಪಾಟೀಲ್ ವಿಚಾರಣೆಗಾಗಿ ಉಪನಗರ ಠಾಣೆಗೆ ಕರೆ ತಂದಿದ್ದಾರೆ.