ಅಂತಾರಾಷ್ಟ್ರೀಯ ಯೋಗ ಸ್ವರ್ಧೆಯಲ್ಲಿ ಸಾಧನೆ ಮಾಡಿದ ದೊಡ್ಡಬಳ್ಳಾಪುರದ ಕುವರಿ - ಜಾಹ್ನವಿ
ಇಂದು ಅಂತಾರಾಷ್ಟ್ರೀಯ ಯೋಗ ದಿನ. ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಡೀ ವಿಶ್ವದ ಬಹುತೇಕ ರಾಷ್ಟ್ರಗಳು ಯೋಗ ಮಾಡುವ ಮೂಲಕ ಅಂತಾರಾಷ್ಟ್ರೀಯ ಯೋಗಾಚರಣೆಗೆ ಕೈ ಜೋಡಿಸಲಿವೆ. ದಕ್ಷಿಣಕೊರಿಯಾದಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಬೆಳ್ಳಿ ಪದಕದ ಸಾಧನೆ ಮಾಡಿರುವ ದೊಡ್ಡಬಳ್ಳಾಪುರದ ಕುವರಿ ಯೋಗ ಕ್ಷೇತ್ರದಲ್ಲಿ ಭರವಸೆಯ ಬೆಳಕು ಮೂಡಿಸಿದ್ದಾರೆ. 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿ ಮತ್ತಷ್ಟು ಸಾಧನೆ ಮಾಡುವ ಮೂಲಕ ದೇಶಕ್ಕೆ ಮತ್ತು ತಮ್ಮೂರಿನ ಕೀರ್ತಿ ಪತಾಕೆ ಹಾರಿಸುವ ಕನಸು ಕಟ್ಟಿಕೊಂಡಿದ್ದಾಳೆ.