ಕರ್ನಾಟಕ

karnataka

ETV Bharat / videos

ಕೊರೊನಾ ಪೀಡಿತರಿಗೆ ಯೋಗಾಭ್ಯಾಸ ಮಾಡಿಸುತ್ತಿರುವ ಯೋಗ ಟೀಚರ್

By

Published : Sep 13, 2020, 2:45 PM IST

ಬಳ್ಳಾರಿಯ ವಿಮ್ಸ್ ಡೆಂಟಲ್ ಕಾಲೇಜ್‌ನಲ್ಲಿರೋ ಕೊರೊನಾ ಕೇರ್ ಸೆಂಟರ್​ನಲ್ಲಿ ಯೋಗ ಟೀಚರ್ ಸಾವಿತ್ರಿ ಎಂಬುವರು ಕೊರೊನಾ ರೋಗಿಯಾಗಿ ದಾಖಲಾಗಿದ್ದಾರೆ. ಅವರು ಅಲ್ಲಿರುವ ಎಲ್ಲಾ ಕೊರೊನಾ ಪೀಡಿತರಿಗೂ ಯೋಗಾಭ್ಯಾಸ ಹೇಳಿಕೊಡುತ್ತಿದ್ದಾರೆ. ಮದ್ದು, ಗುಳಿಗೆಗಳ ಮಧ್ಯೆ ಈ ಯೋಗ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಸಾವಿತ್ರಿ ಹೇಳುತ್ತಾರೆ. ಇಂಥ ಭಾರತೀಯ ಪರಂಪರೆ ಎತ್ತಿ ಹಿಡಿಯುವ ಅಭ್ಯಾಸಗಳು ಮಾನಸಿಕ ಹಾಗೂ ದೈಹಿಕ ಶಕ್ತಿ ಹೆಚ್ಚಿಸುತ್ತವೆ ಎಂದು ಈ ವಿಭಾಗದ ಕೋವಿಡ್ ನೋಡಲ್ ಅಧಿಕಾರಿ ಡಾ. ರಾಘವೇಂದ್ರ ಹೇಳಿದರು.

ABOUT THE AUTHOR

...view details