ತುಮಕೂರಿನಲ್ಲಿ ನಿನ್ನೆ ಒಂದೇ ದಿನ 31 ಮಂದಿಗೆ ಕೊರೊನಾ ಪಾಸಿಟಿವ್..! - Tumkur
ತುಮಕೂರಿನಲ್ಲಿ ನಿನ್ನೆ ಒಂದೇ ದಿನ 31 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 252 ಏರಿಕೆಯಾಗಿದೆ. ಆ ಪೈಕಿ 61 ಮಂದಿ ಗುಣಮುಖರಾಗಿದ್ದು, 183 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ 3 ಮಂದಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಮಕೂರು ತಾಲೂಕಿನಲ್ಲಿ ಈವರೆಗೆ 66 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮಧುಗಿರಿಯಲ್ಲಿ 30 ಮಂದಿ, ಪಾವಗಡದಲ್ಲಿ 31 ಜನರಲ್ಲಿ ಸೋಂಕು ಕಂಡು ಬಂದಿದೆ. ಇತ್ತ ಗ್ರಾಮೀಣ ಪ್ರದೇಶದಲ್ಲಿಯೂ ಕೂಡ ಸೋಂಕು ಹರಡಿರುವುದು ಜಿಲ್ಲಾಡಳಿತದ ನಿದ್ದೆಗೆಡಿಸಿದೆ.