ಬಿಎಸ್ವೈ ಅವತ್ತು ಹೇಗಿದ್ರೋ ಇವತ್ತು ಹಾಗೇ ಇದಾರೆ... ಹೆಬ್ಬಾರ್ ಖಡಕ್ ಮಾತು - Shivaram Hebbar Legislator shirasi
ಶಿರಸಿ : ಯಾರಿಗೆ ಯಾವ ಸಚಿವ ಸ್ಥಾನ ನೀಡಬೇಕು, ಸಚಿವ ಸಂಪುಟ ವಿಸ್ತರಣೆ ಯಾವಾಗ ಮಾಡಬೇಕು ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಲ್ಲಿಯೂ ಯಾವ ಮಾತನ್ನೂ ಹೇಳಿಲ್ಲ. ಯಡಿಯೂರಪ್ಪನವರು ಅಂದು ಹೇಗಿದ್ದರೋ ಇಂದೂ ಕೂಡ ಹಾಗೆ ಇದ್ದಾರೆ. ಮುಂದೆಯೂ ಸಹ ನಮ್ಮ ಜೊತೆ ಹಾಗೆಯೇ ಇರುತ್ತಾರೆ ಎಂದರು. ಇನ್ನು ರಾಷ್ಟ್ರೀಯ ಅಧ್ಯಕ್ಷರು ಹುಬ್ಬಳ್ಳಿಗೆ ಬರುತಿದ್ದಾರೆ ನಾವು ಎಲ್ಲರೂ ಭೇಟಿಯಾಗುತಿದ್ದೇವೆ ಪ್ರತ್ಯೇಕ ಭೇಟಿ ಆಗುವ ಅವಶ್ಯತೆ ಇಲ್ಲ. ನಮಗೆ ಯಾವ ಸಮಸ್ಯೆ ಯೂ ಇಲ್ಲ.ನಾವು ಎಲ್ಲರೂ ಒಟ್ಟಾಗಿ ಇದ್ದೇವೆ ಎಂದರು.