ಹೊರಜಿಲ್ಲೆಗಳಿಂದ ಯಾರಾದರೂ ಬಂದಿದ್ದರೆ ನಮ್ಮ ಗಮನಕ್ಕೆ ತನ್ನಿ: ಪೊಲೀಸರ ಮನವಿ - yelehanka police
ಕೊರೊನಾ ಸೋಂಕು ತಡೆಗಟ್ಟಲು ಸತತ ಪ್ರಯತ್ನ ನಡೆಸುತ್ತಿರುವ ಯಲಹಂಕ ಪೊಲೀಸರು, ಬೀದಿ ಬೀದಿಗೂ ತೆರಳಿ ಹೊರಜಿಲ್ಲೆಗಳಿಂದ ಬಂದರೆ ನಮಗೆ ಮಾಹಿತಿ ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಗೌರಿಬಿದನೂರು, ಚಿಕ್ಕಬಳ್ಳಾಪುರ ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಯಲಹಂಕ ಸೇರಿದಂತೆ ಸುತ್ತಮುತ್ತ ಏರಿಯಾಗಳಿಗೆ ಕೆಲವರು ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಹೊರ ಜಿಲ್ಲೆಗಳಿಂದ ಬಂದಿದ್ದರೆ ದಯವಿಟ್ಟು ಅವರನ್ನು ಹೊರಗೆ ಕಳುಹಿಸಿ, ಇಲ್ಲದಿದ್ದರೆ ನಮ್ಮ ಗಮನಕ್ಕೆ ತನ್ನಿ. ಖುದ್ದು ನಾವೇ ಅವರ ಊರಿಗೆ ತೆರಳಿ ಬಿಟ್ಟು ಬರುತ್ತೇವೆ ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.