ಬಿಎಸ್ವೈ ಇಲ್ದಿದ್ರೆ ಬಿಜೆಪಿಯಿಲ್ಲ: ಶ್ರೀ ಸಿದ್ದಲಿಂಗ ಸ್ವಾಮೀಜಿ ವ್ಯಾಖ್ಯಾನ - ಸಚಿವ ಮಾಧುಸ್ವಾಮಿ
ಬಿಜೆಪಿ ಪಕ್ಷದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬ ಪ್ರಶ್ನಾತೀತ ನಾಯಕರಾಗಿದ್ದಾರೆ. ಅವರಿಲ್ಲದೆ ಪಕ್ಷ ಇಲ್ಲ ಪಕ್ಷ ಇಲ್ಲದೇ ಅವರಿಲ್ಲ ಎಂಬಂತೆ ಇದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ. 'ಈಟಿವಿ ಭಾರತ್' ಜೊತೆ ಮಾತನಾಡಿದ ಅವರು, ಪ್ರತಿಯೊಬ್ಬ ಶಾಸಕರಿಗೂ ಭವಿಷ್ಯದಲ್ಲಿ ಸಮರ್ಥ ನಾಯಕನಾಗಿ ಮುಖ್ಯಮಂತ್ರಿಯಾಗುವ ಅರ್ಹತೆ ಇರುತ್ತದೆ. ಅದೇ ರೀತಿ ಸಚಿವ ಮಾಧುಸ್ವಾಮಿ ಕೂಡ ಒಬ್ಬ ಉತ್ತಮ ಸಂಸದೀಯಪಟು ಆಗುವಂತಹ ಅರ್ಹತೆ ಇದೆ. ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ ಎಂದು ಹೇಳಿದ್ದೇನೆ ಅಲ್ಲದೆ ನಾಳೆ ಆಗುತ್ತಾರೆ ಎಂದು ಹೇಳಿಲ್ಲ ಎಂದು ತಿಳಿಸಿದ್ದಾರೆ.