ಮೂರು ದಿನಗಳಿಂದ ಇಂಟರ್ನೆಟ್ ಸ್ಥಗಿತ: ಕಚೇರಿ ಮುಂದೆ ಕಾದು ಸುಸ್ತಾದ ಜನ - Yalaburga sub Registrar s office server Down
ಇದು ಇಂಟರ್ನೆಟ್ ದುನಿಯಾ. ಜಗತ್ತಿನ ಎಲ್ಲಾ ಆಗು ಹೋಗುಗಳು ನಮ್ಮ ಬೆರಳ ತುದಿಯಲ್ಲೇ ಸಿಗುತ್ತಿವೆ. ಆದರೆ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ನಮ್ಮ ಸರ್ಕಾರಿ ಕಚೇರಿಗಳ ಅವ್ಯವಸ್ಥೆ ಮಾತ್ರ ಇಂದಿಗೂ ಸುಧಾರಣೆಯಾಗಿಲ್ಲ. ಇಂದಿಗೂ ಜನಸಾಮಾನ್ಯರು ಯಾವುದೇ ದಾಖಲೆಗಳು ಬೇಕಾದರೆ ದಿನಗಟ್ಟಲೇ ಸರ್ಕಾರಿ ಕಚೇರಿಗಳ ಮುಂದೆ ಕಾಯಬೇಕು, ಇಲ್ಲವೇ ಅಲೆದಾಡಬೇಕಿದೆ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ ನೋಡಿ.