ಯಕ್ಷಗಾನ ವೇಷಧಾರಿ ಮೇಲೆ ದೈವದ ಆವಾಹನೆ: ವಿಡಿಯೋ ವೈರಲ್ - ಯಕ್ಷಗಾನ ಪಾತ್ರಧಾರಿ
ಉಡುಪಿ: ಬ್ರಹ್ಮಾವರ ಅಯ್ಯಪ್ಪ ಮಂದಿರದಲ್ಲಿ ಅಯ್ಯಪ್ಪ ಸೇವಾ ಸಮಿತಿ ಆಯೋಜಿಸಿದ್ದ ಹಟ್ಟಿಯಂಗಡಿ ಮೇಳದ ಯಕ್ಷಗಾನದಲ್ಲಿ ಯಕ್ಷಗಾನ ವೇಷದಾರಿ ಧೂಮಾವತ ಅವರ ಮೈಮೇಲೆ ದೈವದ ಅವಾಹನೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೈವದೃಷ್ಟಿ ಎಂಬ ಯಕ್ಷಗಾನ ಪ್ರಸಂಗದ ವೇಳೆ ಧೂಮಾವತ ಅವರು ದೈವದ ವೇಷ ಹಾಕಿದ್ದರು. ರಂಗಸ್ಥಳ ಪ್ರವೇಶಕ್ಕೂ ಮುನ್ನ ಆವೇಶಗೊಂಡ ಕಲಾವಿದನ ಮೇಲೆ ದೈವದ ಆವಾಹನೆಯಾಯ್ತು. ಗುರುಸ್ವಾಮಿ ಆಗಮಿಸಿ ಪ್ರಸಾದ ನೀಡಿದ ನಂತರ ಯಕ್ಷಗಾನ ಪಾತ್ರಧಾರಿ ಶಾಂತವಾಗಿದ್ದಾರೆ.