ಕರ್ನಾಟಕ

karnataka

ETV Bharat / videos

ನ್ಯಾಯ ತೀರ್ಪು ನೀಡುವ ಕೋರ್ಟ್ ಆವರಣದಲ್ಲಿ 'ಯಕ್ಷಗಾನ ವೈಭವ' - Yakshagana play

By

Published : Mar 13, 2021, 4:04 AM IST

ಮಂಗಳೂರು: ಇಲ್ಲಿನ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯದ ಆವರಣ ಪೂರ್ತಿ ಇಂದು ಜನಜಂಗುಳಿಯಿಂದ ಗಿಜಿಗುಡುತ್ತಿತ್ತು. ಆದರೆ ಈ ಜನಜಂಗುಳಿ ಯಾವುದೇ ನ್ಯಾಯ ತೀರ್ಮಾನದ ಬಗ್ಗೆ ಕುತೂಹಲಕ್ಕೆ ಆಗಿರೋದಲ್ಲ. ಬದಲಾಗಿ ಇಂದು ಕೋರ್ಟ್ ಆವರಣ ಯಕ್ಷವೈಭವಕ್ಕೆ ಸಾಕ್ಷಿಯಾಗಿತ್ತು. ಮಂಗಳೂರು ವಕೀಲರ ಸಂಘ ಹಾಗೂ ಯಕ್ಷಾಭಿಮಾನಿ‌ ವಕೀಲರ ಸಂಘದಿಂದ ಈ ಯಕ್ಷಗಾನ ಆಯೋಜನೆಗೊಂಡಿತ್ತು. ನ್ಯಾಯಾಲಯದಲ್ಲಿ ಸದಾ ಕರಿಕೋಟಿನಲ್ಲಿ‌ ಇರುತ್ತಿದ್ದ ನ್ಯಾಯಾಧೀಶರು, ವಕೀಲರು ಇಂದು ಯಕ್ಷಗಾನದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿದ್ದರು.

ABOUT THE AUTHOR

...view details