ಕರ್ನಾಟಕ

karnataka

ETV Bharat / videos

ಅಡಚಣೆ ಮಾಡಿದ ಪ್ರೇಕ್ಷಕನಿಗೆ ರಂಗದಲ್ಲೇ ಗದರಿದ ಯಕ್ಷಗಾನ ಕಲಾವಿದ: ವಿಡಿಯೋ ವೈರಲ್​ - artist who scolds the disturbed audience

By

Published : Mar 11, 2021, 5:22 PM IST

ಉಡುಪಿ: ಯಕ್ಷಗಾನ ಕಲಾವಿದ ರಂಗಸ್ಥಳಲ್ಲಿ ಸಂಭಾಷಣೆ ನಡೆಸುತ್ತಿದ್ದ ವೇಳೆ, ಮಕ್ಕಳ ಕುಚೇಷ್ಟೆಯಿಂದ ತಾಳ್ಮೆ ಕಳೆದುಕೊಂಡು ರಂಗದಲ್ಲೇ ಪ್ರೇಕ್ಷಕನನ್ನು ಗದರಿದ ವಿಡಿಯೋ ತುಣುಕು ಭಾರಿ ವೈರಲ್ ಆಗುತ್ತಿದೆ. ಬಡಗುತಿಟ್ಟುವಿನ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಹಾಲಾಡಿ ಮೇಳದ ಯಕ್ಷಗಾನ ನಡೆಯುತ್ತಿತ್ತು. ಈ ವೇಳೆ ಎದುರಿನಲ್ಲಿ ಕುಳಿತ್ತಿದ್ದವರು ಮೊಬೈಲ್ ನೋಡಿಕೊಂಡು ಜೋರಾಗಿ ಮಾತಾಡುತ್ತಿದ್ದರು. ಇದರಿಂದ ಪಾತ್ರ ನಿರ್ವಹಿಸುತ್ತಿದ್ದ ಖ್ಯಾತ ಕಲಾವಿದ ವಿಜಯ ಗಾಣಿಗ ಬೀಜಮಕ್ಕಿ, ಮೊಬೈಲ್ ನೋಡುದಾದ್ರೆ ಹಿಂದೆ ಕುತ್ಕೋ, ಆಗೊಮ್ಮೆ ಹೇಳಿದೇವೆ.. ನೀವು ಮಾತಾಡಿದ್ರೆ ನಮಗೆ ಕಷ್ಟ ಆಗುತ್ತೆ ಅಂತ ಗದರಿದ್ದಾರೆ.

ABOUT THE AUTHOR

...view details