ರಾಣೆಬೆನ್ನೂರಲ್ಲಿ ವರುಣನ ಆರ್ಭಟಕ್ಕೆ ಒಡೆದ ಕೆರೆ ಕೋಡಿ: ನೆಲಕಚ್ಚಿದ ಕಬ್ಬಿನ ಬೆಳೆ - ರಾಣೆಬೆನ್ನೂರಿನಲ್ಲಿ ಕಬ್ಬಿನ ಗದ್ದೆಗೆ ನುಗ್ಗಿದ ಮಳೆ ನೀರು
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ವರುಣನ ಅಬ್ಬರ ಜೋರಾಗಿದ್ದು, ಯಕಲಾಸಪುರ ಗ್ರಾಮದ ಕೆರೆ ಕೋಡಿ ಒಡೆದು ಹೋಗಿದೆ. ಇದರಿಂದ ಅಪಾರ ಬೆಳೆ ಹಾನಿಯಾಗಿದೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಕೆರೆಗೆ ನೀರು ಹೆಚ್ಚಾಗಿದ್ದು, ಇದರಿಂದ ಕೆರೆಯ ಕೋಡಿ ಒಡೆದು ನೀರು ಜಮೀನಿಗೆ ನುಗ್ಗಿದೆ. ಕೆರೆಯ ನೀರಿನ ರಭಸಕ್ಕೆ ಕಬ್ಬಿನ ಬೆಳೆ ನೆಲಕಚ್ಚಿದೆ.