ಮೈಸೂರಿನಲ್ಲಿ ವಿಜಯದಶಮಿ ಸಂಭ್ರಮ: ಶಮಿ ಪೂಜೆ ನೆರವೇರಿಸಿದ ಯದುವೀರ್ - Yaduveer done Banni tree Pooja
ಮೈಸೂರು: ವಿಜಯದಶಮಿಯ ದಿನ ಇಂದು ಯದುವೀರ್ ಭುವನೇಶ್ವರಿ ಆವರಣದಲ್ಲಿರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಜಯದಶಮಿಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಶರನ್ನವರಾತ್ರಿಯ 10ನೇ ದಿನವಾದ ಇಂದು ಅರಮನೆಯಲ್ಲಿ ವಿಜಯದಶಮಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಇಂದು ಬೆಳಗ್ಗೆ ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು ಹಾಗೂ ಪಟ್ಟದ ಒಂಟೆ ಜೊತೆ ಬೆಳ್ಳಿ ಪಲ್ಲಕ್ಕಿಯಲ್ಲಿ ಆಯುಧಗಳನ್ನು ತೆಗೆದುಕೊಂಡು ಭುವನೇಶ್ವರಿ ದೇವಾಲಯದ ಆವರಣದಲ್ಲಿರುವ ಬನ್ನಿ(ಶಮಿ) ಮರಕ್ಕೆ ಪೂಜೆ ಸಲ್ಲಿಸಿದರು.