ಪುಂಡರಿಂದ ಗಾಂಧಿ ವೃತ್ತ ಸ್ವಚ್ಛಗೊಳಿಸಿದ ಸುರಪುರ ಪೊಲೀಸ್
ಕಲಬುರಗಿ: ಭಾರತ ಲಾಕ್ಡೌನ್ ಆದೇಶ ಮೀರಿ ನಗರದಲ್ಲಿ ತಿರುಗಾಡುತ್ತಿದ್ದ ಪುಂಡರಿಗೆ ಸುರಪುರ ನಗರ ಪೊಲೀಸರು ಪುಲ್ ಡ್ರೀಲ್ ಮಾಡಿಸಿದ್ದಾರೆ. ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಹತ್ತಕ್ಕೂ ಹೆಚ್ಚು ಜನ ಯುವಕರಿಗೆ ಕೋಳಿ ಕೂಡಿಸುವ ಜೊತೆಗೆ ಉಟಾಬೈಸ್ ಹೊಡೆಸಿ, ಕಸಬರಿಗೆ ಕೊಟ್ಟು ಮಹಾತ್ಮ ಗಾಂಧಿ ವೃತ್ತದ ಆವರಣವನ್ನು ಸ್ವಚ್ಛಗೊಳಿಸಿಸಿದ್ದಾರೆ. ಅಲ್ಲದೇ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸುವುದಾಗಿ ಪ್ರಮಾಣ ವಚನ ಬೋಧಿಸಿದರು.