ಸ್ವಾಮಿ ವಿವೇಕಾನಂದರ ಜನ್ಮದಿನ ನಿಮಿತ್ತ ಯಾದಗಿರಿಯಲ್ಲಿ ಕಾಂಗ್ರೆಸ್‌ನ ಬೈಕ್ ಜಾಥಾ - National Youth Day
ಸ್ವಾಮಿ ವಿವೇಕಾನಂದ 155ನೇ ಜನ್ಮದಿನದ ನಿಮಿತ್ತ ಜಿಲ್ಲಾ ಕಾಂಗ್ರೆಸ್ ಯುವ ಕಾರ್ಯಕರ್ತರಿಂದ ರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಯಿತು. ಯುವ ದಿನಾಚರಣೆ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಸುಭಾಷ್ ವೃತ್ತದವರೆಗೆ ಬೈಕ್ ಜಾಥಾ ನಡೆಸಲಾಯಿತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಅವರು ಬೈಕ್ ಜಾಥಗೆ ಚಾಲನೆ ನೀಡಿದರು. ಸುಭಾಷ್ ವೃತ್ತದ ಬಳಿ ಸೇರಿದ ಕಾಂಗ್ರೆಸ್‌ನ ಮುಖಂಡರು ಮತ್ತು ಕಾರ್ಯಕರ್ತರು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಸ್ಮರಿಸಿಕೊಳ್ಳುವ ಮೂಲಕ ಜೈಕಾರ ಹಾಕಿದರು.