ಮರಾಠಿ ಚಿಕ್ಕಮ್ಮ, ತೆಲಗು ದೊಡ್ಡಮ್ಮ, ಕನ್ನಡ ನಮ್ಮಮ್ಮ: ಸಾಹಿತಿ ಜಗನ್ನಾಥ್ ಮೂಲಗೆ
ಗಡಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಚುನಾವಣೆ ನಡೆಯುತ್ತಿದೆ. ಒಂದೆಡೆ ಮರಾಠಿ ಭಾಷೆ ಮತ್ತೊಂದೆಡೆ ತೆಲುಗು ಭಾಷಾ ಪ್ರಭಾವದಲ್ಲಿ ಕನ್ನಡ ಬಹಳ ತಡವಾಗಿ ಅಭಿವೃದ್ಧಿಯಾಗಿದೆ. ಗಡಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಶಾಲೆ, ವಸತಿ ಶಾಲೆಗಳನ್ನು ಸ್ಥಾಪನೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಸಾಹಿತ್ಯ ಸಮ್ಮೇಳನಗಳ ಮೂಲಕ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಹಿರಿಯ ಸಾಹಿತಿ ಜಗನ್ನಾಥ್ ಮೂಲಗೆ ಅವರು 'ಈಟಿವಿ ಭಾರತ'ಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.