ಏಲಕ್ಕಿ ನಗರಿ ಮಣ್ಣಿನೊಳಗೆ ತೊಡೆತಟ್ಟಿದ ಪೈಲ್ವಾನರು.. ಹೌದೋ ಹುಲಿಯಾ ಅಂತ್ಹೇಳಿ ಹುರುದುಂಬಿಸಿದ ಜನ! - ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡದಲ್ಲಿ ಲಕ್ಷ್ಮಿದೇವಿ ರಥೋತ್ಸವ
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡದಲ್ಲಿ ಲಕ್ಷ್ಮಿದೇವಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಜಾತ್ರೆ ಅಂಗವಾಗಿ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಮೂರು ದಿನಗಳ ಕಾಲ ನಡೆದ ಸ್ಪರ್ಧೆಗಳಲ್ಲಿ ಹಾವೇರಿ ಸೇರಿ ಸುತ್ತಮುತ್ತಲ ಜಿಲ್ಲೆಗಳ ನೂರಾರು ಕುಸ್ತಿಪಟುಗಳು ಪಾಲ್ಗೊಂಡಿದ್ದರು. ತಮ್ಮ ವೈವಿಧ್ಯಮಯ ಪಟ್ಟುಗಳನ್ನ ಪ್ರದರ್ಶಿಸುವ ಮೂಲಕ ಎದುರಾಳಿಗಳಿಗೆ ಸೋಲಿನ ರುಚಿ ಉಣಿಸಿದರು.