ದೇವೇಗೌಡರ ಗೆಲುವಿಗಾಗಿ ವಿಶೇಷ ಪೂಜೆ... 5001 ಈಡುಗಾಯಿ ಒಡೆದ ಕಾರ್ಯಕರ್ತರು! - ಜೆಡಿಎಸ್
ತುಮಕೂರು ತಾಲೂಕು ಹೆಬ್ಬೂರು ಗ್ರಾಮದ ಚಿಕ್ಕಣ್ಣ ಸ್ವಾಮಿ ದೇವಾಲಯದ ಎದುರು ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು ದೇವೇಗೌಡರ ಗೆಲುವಿಗೆ 5001 ಈಡುಗಾಯಿ ಒಡೆದರು. ಈ ಸಾರಿಯೂ ಮತ್ತೆ ಮಣ್ಣಿನ ಮಗ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಧ್ವನಿ ಸಂಸತ್‌ನಲ್ಲಿ ಪ್ರತಿಧ್ವನಿಸಲಿ ಅಂತಾ ದೇವರಲ್ಲಿ ಪ್ರಾರ್ಥಿಸಿದರು.